ಕಾಸರಗೋಡಿನ ಪೆರ್ಲ ಗೋಪಾಲಕೃಷ್ಣ ಪೈ ರವರು, ಕನ್ನಡ ಭಾಷೆಯಲ್ಲಿ ಕತೆ, ನಾಟಕ , ಪ್ರಬಂಧ, ಲೇಖನ ಕಾದಂಬರಿಗಳನ್ನು ಬರೆಯುವುದರಲ್ಲಿ ಪ್ರವೀಣರು. ನಾಟಕ ವಿಮರ್ಶೆ ಮೊದಲಾದ ಹಲವು ಪ್ರಕಾರಗಳಲ್ಲಿ ಕೈಯ್ಯಾಡಿಸಿ ಉತ್ತಮ ಸಾಹಿತ್ಯ ಕೃಷಿಯನ್ನು ಬೆಳೆಸುತ್ತಿರುವ ಗೋಪಾಲಕೃಷ್ಣ ಪೈ ರವರ ಮತ್ತಿತರ ಕೃತಿಗಳು. == ಕಾದಂಬರಿಗಳು == ಸ್ವಪ್ನ ಸಾರಸ್ವತ ಬ್ರಹ್ಮ (೨೦೨೦) == ಕಥಾ ಸಂಕಲನಗಳು == ಬೇಲಾಡಿ ಹರಿಶ್ಚಂದ್ರ (೨೦೨೦) ಮೂರು ಮತ್ತಿಷ್ಟು (೨೦೧೦) == ಅನುವಾದಗಳು == ಮಹಾತ್ಮನಿಗಾಗಿ ಕಾಯುತ್ತಾ. == ಪ್ರಶಸ್ತಿಗಳು == ಸ್ವಪ್ನ ಸಾರಸ್ವತ ಕಾದಂಬರಿಗೆ ೨೦೧೦ ರ ಸಾಲಿನ 'ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'ದೊರೆತಿದೆ. ತಾಮ್ರಪತ್ರ, ಶಾಲು, ಹಾಗೂ ಒಂದು ಲಕ್ಷರೂಪಾಯಿಗಳ ನಗದು ಬಹುಮಾನವನ್ನು ಈ ಪ್ರಶಸ್ತಿವಿಜೇತರು ಪಡೆಯುತ್ತಾರೆ. == ಚಲನಚಿತ್ರ ಸಾಹಿತ್ಯ == ’ಉಜ್ವಾಡು’ ಎಂಬ ಕೊಂಕಣಿ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಕಾಸರಗೋಡು ಚಿನ್ನಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಷ್ಟ್ರಮಟ್ಟದ ಉತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ವಿಜೇತ,ಖ್ಯಾತ ನಿರ್ದೇಶಕ, ಗಿರೀಶ್ ಕಾಸರವಳ್ಳಿಯವರ ನಿರ್ದೇಶನದ ಕನಸೆಂಬ ಕುದುರೆಯನ್ನೇರಿ ಚಿತ್ರಕ್ಕೆ ಚಿತ್ರಕಥೆಯನ್ನು ರಚಿಸಿಕೊಟ್ಟಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಇವರ ಚಿತ್ರಕಥೆಗಾಗಿ 'ಉತ್ತಮ ಚಿತ್ರಕಥೆ ಪ್ರಶಸ್ತಿ' ದೊರೆತಿದೆ. == ಉಲ್ಲೇಖಗಳು ==